March 30, 2023
Aravinda Bolar Accident

Actor Aravind Bolar Accident: ತುಳು ಚಿತ್ರರಂಗ ಹಾಸ್ಯ ಕಲಾವಿದ ಅರವಿಂದ ಬೋಳಾರವರಿಗೆ ರಸ್ತೆ ಅಪಘಾತ,  ಆಸ್ಪತ್ರೆಗೆ ದಾಖಲು

 

Aravind Bolar Accident: ತುಳು ಚಿತ್ರರಂಗದ ಮೇರು ನಟ ಹಾಸ್ಯ ಚಕ್ರವರ್ತಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರಿಗೆ ಪಂಪವೆಲ್ ನಲ್ಲಿ ರಸ್ತೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

 

ಅರವಿಂದ ಬೋಳಾರ್ ಇಂದು ಬೆಳಗ್ಗೆ ಪಂಪವೆಲ್ಲ್ ನಲ್ಲಿ ತನ್ನ ಸ್ಕೂಟರ್ ಚಲಾಯಿಸಬೇಕಾದರೆ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬೀಳುತ್ತಾರೆ. ರಸ್ತೆಗೆ ಬಿದ್ದ ರಭಸದಲ್ಲಿ ಅರವಿಂದ ಬೋಳಾರ್ ರವರ ಕಾಲಿಗೆ ಗಂಭೀರ ಗಾಯವಾಗಿದ್ದು ಅವರನ್ನು ಯೆನೆಪೋಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. Aravind Bolar Accident. 

Aravind Bolar Accident
Aravind Bolar Accident

ಅರವಿಂದ ಬೋಳಾರ್ ಅವರು ಪಂಪವೆಲ್ ಬಳಿ ತನ್ನ ದ್ವಿಚಕ್ರ ಚಲಾಯಿಸುತ್ತಾ ಹೋಗುವಾಗ ಮಸೀದಿ ಬಳಿ ತಲುಪಬೇಕಾದರೆ ಆಯತಪ್ಪಿ ಸ್ಕಿಡ್ ಆಗಿ ಬಿದ್ದು ಬಲ ಕಾಲಿನ ಮೂಲೆ ಮುರಿತ ಆಗಿದೆ ಎಂದು ತಿಳಿದು ಬಂದಿದೆ. 

 

ಅದೃಷ್ಟವಶಾತ್ ಬೋಳಾರ್ ಅವರು ಹೆಲ್ಮೆಟ್ ಧರಿಸಿದ್ದರಿಂದ ಸಂಭಾವಿತ ಭಾರಿ ಅನಾಹುತ ತಪ್ಪಿದ್ದು, ಸದ್ಯ  ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ಈಗಾಗಲೇ ಆಸ್ಪತ್ರೆಗೆ ಸಂಚಾರಿ ಅಸ್ಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ ಭೇಟಿ ನೀಡಿ ವಿಚಾರಿಸಿದ್ದಾರೆ. 

 

ಮೂಲಗಳ ಪ್ರಕಾರ ನಾಳೆ ಬೋಳಾರ್ ಅವರ ಬಲ ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.  ಹೆಚ್ಚಿನ ಪರಿಸ್ಥಿತಿ ಬಗ್ಗೆ ಇನ್ನಷ್ಟೇ ಮಾಹಿತಿ ದೊರೆಯಬೇಕಾಗಿದೆ. 

 

Recommended For You:

 

Leave a Reply